Section A
Q1. ಈ ಕೆಳಗಿನವುಗಳಲ್ಲಿ ಯಾವುದಾದರೂ ಒಂದು ವಿಷಯವನ್ನು ಕುರಿತು 600 ಪದಗಳಲ್ಲಿ ಪ್ರಬಂಧವನ್ನು ಬರೆಯಿರಿ: 100 ಸಂಸ್ಥತಿ ಏಕೆ ಮುಖ್ಯವಾಗಿದೆ?
(a) ಅಚ್ಚುಕಟ್ಟಾದ (Smart Cities) ಪಟ್ಟಣಗಳು ಮತ್ತು ಅಶಿಸ್ತಿನಿಂದ (Unsmart) ಕೂಡಿದ ನಾಗರಿಕರು
(b) ನ್ಯಾಯಾಂಗದ ಕ್ರಿಯಾಶೀಲತೆ ವಿರುದ್ಧ ನ್ಯಾಯಾಂಗದ ಅಸೀಮಿತತೆ
(c) ಶಾಲಾ ವಿದ್ಯಾರ್ಥಿಗಳಲ್ಲಿ ನಮ್ಮ ಪರಂಪರೆಯನ್ನು ಗೌರವಿಸಿ ಪೋಷಿಸುವ ಗುಣವನ್ನು ಬೆಳೆಸುವ ಬಗೆ
(d) 2. ಕೆಳಗೆ ಕೊಟ್ಟಿರುವ ಗದ್ಯಭಾಗವನ್ನು ಓದಿ ಕೊನೆಯಲ್ಲಿ ನೀಡಿರುವ ಪ್ರಶ್ನೆಗಳಿಗೆ ಉತ್ತರಿಸಿರಿ. ನಿಮ್ಮ ಉತ್ತರಗಳು ನೇರ, ಸ್ವಷ್ಟ ಮತ್ತು ಸಂಕ್ಷಿಪ್ತವಾಗಿರಲಿ: 12×5 = 60 ಮಹಿಳೆಯು ಅರ್ಧ ಆಕಾಶವನ್ನು ಕರಗತ ಮಾಡಿಕೊಂಡಿರುವಳೆಂದು ಹೇಳಲಾಗುತ್ತದೆ. ನಾವು ಈ ವಿಷಯ ಕುರಿತು ಸಂಶೋಧನೆ ನಡೆಸಿ ಹೇಳುತ್ತೇವೆ. ಅಲ್ಲದೆ ಆಕೆಯು ಇದಕ್ಕಿಂತಲೂ ಹೆಚ್ಚಿಗೆ ಆಕ್ರಮಿಸಿಕೊಂಡು ಅಧಿಕಾರಿಣಿ ಆಗಿದ್ದಾಳೆ. ಆದರೆ ಎಲ್ಲ ದೇಶಗಳ, ಎಲ್ಲ ಕಾಲಗಳ ಇತಿಹಾಸವನ್ನು ಅವಲೋಕಿಸಿದಾಗ, ಪ್ರತಿಯೊಂದು ಸಂಸ್ಕೃತಿ, ಪರಂಪರೆ, ಪ್ರದೇಶ, ಧರ್ಮ, ಜಾತಿ, ಜನಾಂಗ ಹಾಗೂ ವರ್ಗಗಳಲ್ಲಿ ಮಹಿಳೆಗೆ ಗೌರವಯುತವಾದ ಸ್ಥಾನ ಸಿಕ್ಕಿಲ್ಲ ಪುರುಷನ ಸಮಾನವಾದ ಸ್ಥಾನಮಾನಗಳು, ಗೌರವಗಳು ಆಕೆಗೆ ಎಲ್ಲ ದೇಶಗಳಲ್ಲಿ ಹಿಂದೆ ಮತ್ತು ಇಂದು ಸಿಕ್ಕಿಲ್ಲವೆಂಬುದನ್ನು ಗುರುತಿಸುವೆವು. ಮಹಿಳೆಯನ್ನು ವ್ಯವಸ್ಥಿತವಾದ ರೀತಿಯಲ್ಲಿ ಕೀಳಾಗಿ ಗಣಿಸುವ, ಆಕೆಗೆ ತಾರತಮ್ಯ ಮಾಡುವ ಸ್ಥಿತಿ ಸಮಾಜದಲ್ಲಿದೆ. ಆಹಾರ, ಶಿಕ್ಷಣ, ಉದ್ಯೋಗ, ಆರೋಗ್ಯ ಕಾಳಜಿ ಮತ್ತು ಅಭಿವೃದ್ಧಿಪರ ಕೆಲಸ-ಕಾರ್ಯಗಳಲ್ಲಿ ಭಾಗವಹಿಸುವಿಕೆ, ಇರುವಿಕೆ, ಚಿಂತನೆ, ಕನಸು ಮತ್ತು ವಾಸ್ತವ - ಈ ಎಲ್ಲದರಲ್ಲಿ ಮಹಿಳೆಯು ಪುರುಷನ ಸಮಾನವಲ್ಲವೆಂಬ ತಾರತಮ್ಯಭಾವ ಮುಂದುವರಿದಿದೆ. ಸರಿಯಾದ ರೀತಿಯಲ್ಲಿ ಹೇಳುವುದಾದರೆ ಮಹಿಳೆಯು ವಿಶ್ವದ ಅತಿದೊಡ್ಡ ಅಲ್ಪಸಂಖ್ಯಾತಳು ಎನ್ನಬಹುದು. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಪುರುಷರು ಮಹಿಳೆಯನ್ನು ಒಬ್ಬ ಸ್ವತಂತ್ರಜೀವಿ ಎಂದು ಪರಿಗಣಿಸದೆ, ಆಕೆಯ ಅಸ್ತಿತ್ವವನ್ನು ಗುರುತಿಸದೆ ಆಕೆಯೊಂದು ವಸ್ತುವೆಂದು ಭಾವಿಸಿದ್ದಾರೆ. ಅವರು ತಮ್ಮಷ್ಟಕ್ಕೆ ತಾವು ಸಂಪೂರ್ಣರು, ಸ್ವತಂತ್ರರು ಎಂದು ಭಾವಿಸಿರುವರು. ಮಹಿಳೆಯರನ್ನು ಇವರು ಗೌರವದಿಂದ, ಸ್ವಾಯತ್ತತೆಯ ದೃಷ್ಟಿಯಿಂದ ಮತ್ತು ಪುರುಷನಿಗೆ ಸಮಾನ ಗೌರವ ಹಾಗೂ ಸಮಾನ ಹಕ್ಕುಗಳನ್ನು ನ್ಯಾಯಯುತವಾಗಿ ಅವರೂ ಪಡೆಯಬಲ್ಲರು ಎಂಬುದನ್ನು ಅರ್ಥಮಾಡಿಕೊಳ್ಳರು. ಮಹಿಳೆಯರು ತಮ್ಮ ಅಧೀನದಲ್ಲಿರುವ ಒಂದು ಬಗೆಯ ವಸ್ತುವೆಂದು ತಿಳಿದು ವರ್ತಿಸುವರು. ಮಹಿಳೆ ಕೇವಲ ವಂಶಾಭಿವೃದ್ಧಿಯನ್ನು ಮುಂದುವರಿಸಲಿಕ್ಕಾಗಿ, ಪುರುಷರ ಸೇವೆ ಮಾಡಲಿಕ್ಕಾಗಿ ಮತ್ತು ಪುರುಷರಿಗೆ ಲೈಂಗಿಕ ತೃಪ್ತಿ ನೀಡಲು ಒಂದು ಸಾಧನವಾಗಿ ಇರುತ್ತಾಳೆಂದು ಪುರುಷರು ತಿಳಿದಿರುವರು. ಮಹಿಳೆಯು ಕೇವಲ ಯಾರದೋ ಮಗಳಾಗಿ, ಇನ್ನಾರದೋ ಪತ್ನಿಯಾಗಿ ಇಲ್ಲವೇ ತಾಯಿಯಾಗಿ ಸಾಂಸ್ಥೃತಿಕವಾಗಿ ಗುರುತಿಸಿಕೊಳ್ಳಬಲ್ಲಳು. ಇದರ ಹೊರತಾಗಿ ಅವಳಿಗೆ ಪ್ರತ್ಯೇಕವಾಗಿ ತನ್ನನ್ನು ಗುರುತಿಸಿಕೊಳ್ಳಲು ಆಸ್ಪದವಿಲ್ಲ. ವಿಭಿನ್ನ ದೃಷ್ಟಿಯಲ್ಲಿ ಅವಳು ಗುರುತಿಸಿಕೊಳ್ಳಲು ಯತ್ನಿಸಿದರೂ ಆಕೆಯನ್ನು ಪುರುಷರು ಕೀಳು ದೃಷ್ಟಿಯಿಂದ ಕಾಣುವುದುಂಟು. ಏಕಾಂಗಿಯಾದ ಮಹಿಳೆಯು ಈ ವರ್ತುಲದಿಂದ ಬಿಡುಗಡೆ ಹೊಂದಿ ಹೊರಗೆ ಬಂದು ಜೀವಿಸತೊಡಗಿದಾಗ ಪುರುಷರು ಆಕೆಯನ್ನು ಕೀಳಾಗಿ ಗಣಿಸುವುದುಂಟು. ಸಾಂಸ್ಕೃತಿಕ ದೃಷ್ಟಿಕೋನದಲ್ಲಿ ಮಹಿಳೆಯು ಒಬ್ಬಳೇ ಇರದೆ ವಿವಾಹಿತಳಾಗಿ ಕುಟುಂಬದಲ್ಲಿರಬೇಕು. ಆದರೆ ಮದುವೆಯಾಗಿರದ ಅಥವಾ ವಿಧವೆಯಾಗಿರುವ, ಗಂಡನಿಂದ ಬಿಡುಗಡೆಗೊಂಡ ಸ್ತ್ರೀಯರಿಗೆ ರಕ್ಷಣೆ ಇರದು. ಪುರುಷನ ರಕ್ಷಣೆಯಲ್ಲಿರದ ಇಂಥ ಸ್ತ್ರೀಯರನ್ನು ಸಮಾಜವೂ ಒಳ್ಳೆಯ ದೃಷ್ಟಿಯಿಂದ ನೋಡದು. ಈಗಲೂ ಈ ತರದ ದೃಷ್ಟಿ ಹೆಚ್ಚಾಗುತ್ತ ಮುಂದುವರಿದಿದೆ. ಮಹಿಳೆಯು ಅಕಸ್ಥಾತ್ತಾಗಿ ರೋಗರುಜಿನಗಳಿಂದ, ಅಪಘಾತದಿಂದ ತನ್ನ W-F$¢-QI-RNU/16 2