Section A
Q1. ಈ ಕೆಳಗಿನವುಗಳಲ್ಲಿ ಯಾವುದಾದರೂ ಒಂದು ವಿಷಯದ ಬಗ್ಗೆ 600 ಪದಗಳಲ್ಲಿ ಪ್ರಬಂಧ ಬರೆಯಿರಿ : ತಾಂತ್ರಿಕ ಜ್ಞಾನದ ಅತಿ ಬಳಕೆಯ ಅಪಾಯಗಳು
(a) ಧರ್ಮ ನಿರಪೇಕ್ಷತೆಯು ಗಣತಂತ್ರದ ಬಲ
(b) ಭಾರತೀಯ ಅರ್ಥವ್ಯವಸ್ಥೆಗೆ ನೋಟ್ಬಂದಿಯಿಂದ ಆಗಬಹುದಾದ ಲಾಭಗಳು
(d) ಆಯುರ್ವೇದ ವೈದ್ಯಕೀಯ ವ್ಯವಸ್ಥೆಯೆಡೆಗೆ ಪಾಶ್ಚಿಮಾತ್ಯ ರಾಷ್ಟ್ರಗಳ ಒಲವು 2. ಕೆಳಗೆ ಕೊಟ್ಟಿರುವ ಗದ್ಯಭಾಗವನ್ನು ಓದಿ ಕೊನೆಯಲ್ಲಿ ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿರಿ. ನಿಮ್ಮ ಉತ್ತರಗಳು ನೇರ, ಸ್ಪಷ್ಟ ಮತ್ತು ಸಂಕ್ಷಿಪ್ತವಾಗಿರಲಿ : 12×5 = 60 ಪುಸ್ತಕಗಳು ಮನಸ್ಸಿಗೆ ಒಳ್ಳೆಯ ಆಹಾರ. ಚಿಂತಕರೊಬ್ಬರು ಹೀಗೆ ಹೇಳಿದ್ದಾರೆ : ಮಾನವನು ಚಿಂತಿಸಿದ್ದೆಲ್ಲವನ್ನೂ ಮಾಡಿದ್ದೆಲ್ಲವನ್ನೂ ಕಂಡರಿತದ್ದೆಲ್ಲವನ್ನೂ ಪುಸ್ತಕಗಳಲ್ಲಿ ಸೆರೆಹಿಡಿಯಲಾಗಿದೆ. ಮಾನವ ಸಂಸ್ಕೃತಿ ಮತ್ತು ನಾಗರಿಕತೆಯ ಮುನ್ನಡಿಗೆ, ಪ್ರಗತಿ ಮತ್ತು ಅರಳಿಕೆಯ ಶ್ರೇಯಸ್ಸು ಪುಸ್ತಕಗಳದ್ದು. ಪುಸ್ತಕಗಳ ಬೆಲೆ ಮತ್ತು ಪ್ರಾಮುಖ್ಯತೆಗೆ ಸಾಟಿಯಾದದ್ದು ಯಾವುದೂ ಇಲ್ಲ. ಪುಸ್ತಕಗಳು ನಮ್ಮ ಒಳಗನ್ನು ಬೆಳಗುತ್ತವೆ. ಒಳ್ಳೆಯ ಪುಸ್ತಕಗಳು ಮಾನವನನ್ನು ಮೃಗತ್ವದಿಂದ ದೈವಿಕಕೆಯತ್ತ ಕೊಂಡೊಯ್ಯುತ್ತವೆ. ಅವು ಮಾನವನ ಸಾತ್ವಿಕ ಪ್ರವೃತ್ತಿಯನ್ನು ಬಡಿದೆಬ್ಬಿಸುತ್ತವೆ, ಸಮಾಜ ಮತ್ತು ರಾಷ್ಟ್ರವನ್ನು ಮುನ್ನಡೆಸುತ್ತವೆ. ಪುಸ್ತಕಗಳು ನಮ್ಮನ್ನು ಉದ್ದೀಪಿಸುತ್ತಾ ನಮ್ಮ ಮನಸ್ಸುಗಳ ಮೇಲೆ ಕೊನೆಯರಿಯದ ಪರಿಣಾಮ ಬೀರುತ್ತವೆ. ಪುಸ್ತಕಗಳ ಉಪಯೋಗ ನಮ್ಮ ಮನೋರಂಜನೆಗೂ ಆಗುತ್ತದೆ. ಇಲ್ಲಿ ‘ಮನೋರಂಜನೆ’ ಎಂದರೆ ಕೇವಲ ಮಜಾ ಮಾಡುವುದಲ್ಲ ಅದರ ಅರ್ಥ ಹೆಚ್ಚು ಗಹನವಾದದ್ದು ಓದುಗರ ಮನಸ್ಸುಗಳನ್ನು ತಟ್ಟ ಅವರ ಹೃದಯಗಳನ್ನು ತನ್ಧಯಗೊಳಿಸುವ ಪುಸ್ತಕಗಳು ನಿಜವಾದ ಅರ್ಥದಲ್ಲಿ ‘ಮನೋರಂಜಕ’ ಪುಸ್ತಕಗಳು. ನಮ್ಮ ಮನಸ್ಸುಗಳನ್ನು ಹಿಡಿದಿಡುವ ಪುಸ್ತಕಗಳು ಮುದ ನೀಡುವಂಥವು. ಈ ನಿಟ್ಟಿನಲ್ಲಿ ‘ಲಘು ಸಾಹಿತ್ಯ’ ಕೂಡ ಕಡಿಮೆ ಮಹತ್ವದ್ದಲ್ಲ. ಆ ಬಗೆಯ ಸಾಹಿತ್ಯ ಮನುಷ್ಯನ ಮಾನಸಿಕ ಒತ್ತಡವನ್ನು ಮೊಟಕುಗೊಳಿಸಿ ಆತನ ಖಿನ್ನತೆಯನ್ನು ಹೋಗಲಾಡಿಸುತ್ತದೆ. ಒಳ್ಳೆಯ ಪುಸ್ತಕಗಳು ಮಾನವನಿಗೆ ಅರಿವು ಮತ್ತು ರಂಜನೆಯನ್ನು ಒದಗಿಸುತ್ತವೆ. ವಿಜ್ಞಾನ, ವಾಣಿಜ್ಯ, ಕಲೆ ಮತ್ತು ಕಾನೂನುಗಳ ಕುರಿತಾಗಿರುವ ಪುಸ್ತಕಗಳು ಮಾನವನ ಅರಿವಿಗೆ ಕೊಡುಗೆಗಳು. ಇವುಗಳ ಓದು ಮಾನವರು ಒಳ-ಶಕ್ತಿಯನ್ನು ಅನುಭವಿಸುವ ಹಾಗೆ ಮಾಡುತ್ತದೆ. ನಿಜ ಹೇಳಬೇಕೆಂದರೆ, ಪುಸ್ತಕಗಳು ನಮ್ಮ ನಿಜವಾದ ಮಾರ್ಗದರ್ಶಕರು. ಹೊಸ ಕ್ಷೇತ್ರಗಳ ಬಗ್ಗೆ ಅರಿವು ನೀಡುವುದರ ಮತ್ತು ಬದುಕಿನ ಮತ್ತು ಜಗತ್ತಿನ ರಹಸ್ಯಗಳ ಇಣುಕುನೋಟ ನೀಡುವುದರ ಜೊತೆ ಜೊತೆಗೆ ನಮ್ಮನ್ನು ಚಿಂತಿಸಲು ಪ್ರೇರೇಪಿಸುತ್ತವೆ. ನಮ್ಮ ಇಕ್ಕಟ್ಟು ಬಿಕ್ಕಟ್ಟುಗಳನ್ನು ಪರಿಹರಿಸುವುದರೊಂದಿಗೆ ನಮ್ಮನ್ನು ಬಲಪಡಿಸುತ್ತವೆ. ಗಾಂಧೀಜಿ ಭಗವದ್ಗೀತೆಯನ್ನು ‘ತಮ್ಮ ತಾಯಿ’ ಎಂದೆಣಿಸಿದರು. ಯಾಕೆಂದರೆ ತಮ್ಮ ಬದುಕಿನ ಪ್ರತಿಯೊಂದು ಪರಿಸ್ಥಿತಿಯಲ್ಲೂ ಗೀತೆ ಅವರಿಗೆ ಮಾರ್ಗದರ್ಶನ ನೀಡಿತು. ಪುಸ್ತಕಗಳು ನಮ್ಮನ್ನು ಶಿಕ್ಷಿಸದ, ನಮ್ಮೊಡನೆ ಕೋಪಗೊಳ್ಳದ ಮಾರ್ಗದರ್ಶಕರು. ಅವು ತಾವು ಮಾಡುವುದಕ್ಕೆ ಪ್ರತಿಯಾಗಿ ಏನನ್ನೂ ಬಯಸುವುದಿಲ್ಲ, ಏನನ್ನೂ ಬೇಡುವುದಿಲ್ಲ. ಆದರೆ ಹಾಗಾಗ್ಯೂ ಅವು ನಮಗೆ ಅಮರತ್ವದ ಸಾರವನ್ನು ಕೊಡಲು ತಪ್ಪುವುದಿಲ್ಲ ಪುಸ್ತಕಗಳು ಮಾನವರಿಗೆ ಮುದ, ಸಂತೋಷ ಮತ್ತು ನಿರಾಳತೆಯನ್ನು ತಂದಿಕ್ಕುತ್ತವೆ. ಪುಸ್ತಕ-ಪ್ರೇಮಿ ಸುಖಪ್ರದ ಮತ್ತು ಭಾಗ್ಯಶಾಲಿ. ಆತ ಎಂದೂ ನಿರುತ್ಸಾಹಕ್ಕೆ, ಜಡತ್ವಕ್ಕೆ ಬಲಿ ಆಗುವುದಿಲ್ಲ ಶೂನ್ಯ-ಮನಸ್ತನಾಗುವುದಿಲ್ಲ ಪುಸ್ತಕಗಳು ನಮ್ಮನ್ನು ಕೈಹಿಡಿದು ನಡೆಸುತ್ತವೆ ಎಂದು ನಾವು ನಂಬಬಹುದು. ಪುಸ್ತಕಗಳನ್ನು ನಾವು ನೆಮ್ಮಬಹುದು. 2 Q-C-RND/26